Salman Khan : ಸಲ್ಮಾನ್ ಖಾನ್ಗೆ 2013ರಲ್ಲೇ ಈ ಯುವತಿ ಜೊತೆ ಮದುವೆ ಆಗಿತ್ತಂತೆ..!
Salman Khan wedding : ಸಲ್ಮಾನ್ ಖಾನ್ ಅವರ ಮೇಲೆ 2013ರಲ್ಲಿ ಛತ್ತೀಸ್‌ಗಢ ಮೂಲದ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಯಾರು ಆ ಯುವತಿ.. ಆಗಿದ್ದಾದ್ರೂ ಏನು.,. ಈ ಕುರಿತ ವರದಿ ಇಲ್ಲಿದೆ ನೋಡಿ..
Salman Khan marriage : ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ತಮ್ಮ ಸಿನಿ ಜರ್ನಿಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇನ್ನು ವಯಸ್ಸು ಐವತ್ತು ದಾಟಿದರೂ ಸಲ್ಮಾನ್ ಭಾಯ್ ಇನ್ನೂ ಸಿಂಗಲ್. ಆದ್ರೆ ನಟನಿಗೆ 2013ರಲ್ಲಿ ಮದುವೆಯಾಗಿತ್ತು ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸಲ್ಮಾನ್ ಖಾನ್ ಅವರ ಮೇಲೆ 2013ರಲ್ಲಿ ಛತ್ತೀಸ್‌ಗಢ ಮೂಲದ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಬೈಕುಂಟ್‌ಪುರದ ರಾಣಿ ಎಂಬ ಮಹಿಳೆಯನ್ನು ಸಲ್ಮಾನ್ ಖಾನ್ ಮದುವೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಷಯವಾಗಿ ಯುವತಿಯ ಚಿಕ್ಕಮ್ಮ ಬಸಂತಿಬಾಯಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ:ಸೋಷಿಯಲ್ ಮೀಡಿಯಾ ಸೆನ್ಸೇಷನ್ ಹುಡುಗಿ ಈಗ ದೊಡ್ಡ ಪರದೆಯ ಮೇಲೆ! ಯಾರಿದು? ಯಾವುದು ಆ ಸಿನಿಮಾ ಇಲ್ಲಿದೆ
ಪ್ರಕರಣದ ಹಿನ್ನೆಲೆ : ಛತ್ತೀಸ್‌ಗಢದ ರಾಣಿ ಎಂಬ ಮಹಿಳೆ ಬಸಂತ್ ಲಾಲ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು. 2013 ರಲ್ಲಿ ಬಸಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದರು. ಅವರ ಮರಣದ ನಂತರ, ಆತನ ಕೆಲಸವು ಅವನ ಹೆಂಡತಿಗೆ ಹೋಗಬೇಕು. ಆದರೆ ಬಸಂತ್ ಲಾಲ್ ಅವರ ತಾಯಿ ಬಸಂತಿಬಾಯಿ ಇದನ್ನು ವಿರೋಧಿಸಿದರು. ಅಲ್ಲದೆ, ರಾಣಿ ತನ್ನ ಸೊಸೆಯಲ್ಲ ಎಂದು ಆಕ್ಷೇಪಿಸಿದರು. ಇದರೊಂದಿಗೆ ರಾಣಿ ಛತ್ತೀಸ್‌ಗಢ ನ್ಯಾಯಾಲಯದ ಮೊರೆ ಹೋಗಿದ್ದರು.
ಬಸಂತ್ ಲಾಲ್ ಸಾವಿನ ನಂತರ ರಾಣಿ ಓಡಿಹೋಗಿ ಬಾಲಿವುಡ್ ಹೀರೋ ಸಲ್ಮಾನ್ ಖಾನ್ ರನ್ನು ಮದುವೆಯಾದರು ಎಂದು ಬಸಂತಿಬಾಯಿ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ರಾಣಿ ಸಲ್ಮಾನ್ ಖಾನ್ ಜೊತೆಗಿನ ಫೋಟೋಗಳನ್ನು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ನೀಡಲಾಯಿತು. 2013 ರಿಂದ, ಈ ಪ್ರಕರಣವು ಛತ್ತೀಸ್‌ಗಢದ ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ. ಆದರೆ, ಪ್ರಕರಣದಲ್ಲಿ ಯಾವುದೇ ಪಕ್ಷದ ಪರವಾಗಿ ತೀರ್ಪು ಬಂದಿಲ್ಲ.
ಇದನ್ನೂ ಓದಿ:Pavithra Gowda : ಕೈ ಮೇಲೆ ʼ777ʼ ಅಂತ ಟ್ಯಾಟೂ ಹಾಕಿಸಿದ ಪವಿತ್ರಗೌಡ..! ʼDBossʼ ಮತ್ತು ಹಚ್ಚೆಗೆ ಇದೆ ಸಂಬಂಧ
ರಾಣಿಯ ಪರ ವಕೀಲ ಅಶೋಕ್ ಕುಮಾರ್ ಶುಕ್ಲಾ ಅವರು ಛತ್ತೀಸ್‌ಗಢ ಹೈಕೋರ್ಟ್‌ನಲ್ಲಿ ಮನವಿ ಮಾಡಿದರು, ಬಸಂತಿಬಾಯಿ ಅವರು ನ್ಯಾಯಾಲಯವನ್ನು ತಪ್ಪುದಾರಿಗೆಳೆಯಲು ಬಾಲಿವುಡ್ ಭಾಯಿಜಾನ್ ಅವರನ್ನು ಮದುವೆಯಾಗಿದ್ದಾರೆ ಎಂಬ ನಕಲಿ ಫೋಟೋಗಳನ್ನು ಎಡಿಟ್ ಮಾಡಿದ್ದಾರೆ ಎಂದು ದೂರಿದ್ದರು.
ಸದ್ಯ ಈ ಪ್ರಕರಣ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಇನ್ನೂ ಅಂತಿಮ ತೀರ್ಪು ಪ್ರಕಟವಾಗಿಲ್ಲ. ಆದರೆ, ಕೋರ್ಟ್ ಗಳಲ್ಲಿ ನಡೆಯುತ್ತಿರುವ ಈ ಪ್ರಕರಣ ಬಾಲಿವುಡ್ ಮಸಲ್ ಮ್ಯಾನ್ ಸಲ್ಮಾನ್ ಖಾನ್ ಹೆಸರು ಬಂದಿದ್ದು ಮಾತ್ರ ವಿಪರ್ಯಾಸ.. ಮುಂದೆನಾಗುತ್ತೆ ಅಂತ ಕಾಯ್ದು ನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.